
25th March 2025
ಗುರುಮಠಕಲ. ಮಾ. 24. ನಗರದ ಪುರಸಭೆ ಕಾರ್ಯಾಲಯದ ಸಾಮಾನ್ಯ ಸಭೆ ಮತ್ತು 2025-26 ನೇ ಸಾಲಿನ ಆಯ-ವ್ಯಯದ (ಬಜೆಟ್) ಮಂಜೂರಾತಿ ಸಭೆಯನ್ನು
ಮಾನ್ಯ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಆರ್ ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು , ಬೆಳಿಗ್ಗೆ 10.30 ನಿ.ಕ್ಕೆ ಪ್ರಾರಂಭವಾದ ಸಾಮಾನ್ಯ ಸಭೆ ಮತ್ತು ಬಜೆಟ್ ಮಂಡನೆಯು ಗುರುಮಠಕಲ್ ಪುರಸಭೆ ಮುಖ್ಯಾಧಿಕಾರಿ ಶ್ರೀಮತಿ ಭಾರತಿ ದಂಡೊತಿ ಸಮ್ಮುಖದಲ್ಲಿ ಕೆಳಕಂಡ
ಪ್ರಮುಖ ವಿಷಯಗಳು ಚರ್ಚಿಸಿ ನಿರ್ಣಯ ತೆಗೆದು ಕೊಳ್ಳಲಾಯಿತು. ಆಸ್ತಿ ತೆರಿಗೆ ದರ ಪರಿಷ್ಕರಣೆ ಶೇಕಡ 3℅ ಹೆಚ್ಚಳ. ಆದಾಯ ಮತ್ತು ಖರ್ಚಿನ ವಿವರ ನೀಡಿ ಅನಧಿಕೃತ ಪುರಸಭೆ ಪರವಾನಿಗೆ ಇಲ್ಲದ ಸಂಸ್ಥೆಗಳ ವಿರುದ್ದ ಕ್ರಮ ಕೈಗೊಳ್ಳುವ ಕುರಿತು, ಪುರಸಭೆ ಜಾಹೀರಾತು ಫಲಕ 3 ರೂಪಾಯಿ/ಚದರ ಫೂಟ್ ಹಾಗೂ ಜಾಹೀರಾತಿಗಾಗಿ ಬಳಸುವ ನೆಲಬಾಡಿಗೆ ವಾರ್ಷಿಕವಾಗಿ 30000 ರೂಪಾಯಿ ನಿಗದಿ ಮಾಡಲಾಗಿದೆ, ವರ್ಗಾವಣೆ ಶುಲ್ಕ ಯಥಾಸ್ಥಿತಿ ಕಾಯ್ದುಕೊಳ್ಳಲು ತೀರ್ಮಾನಿಸಲಾಯಿತು. ಅಂಬೇಡ್ಕರ್ ಕಲ್ಯಾಣ ಮಂಟಪ ಮೂಲಭೂತ ಸೌಕರ್ಯ ಕಲ್ಪಿಸಿ ಬಾಡಿಗೆ 5000 ರೂಪಾಯಿ ನಿಗದಿ ಮಾಡಲಾಯಿತು. ಬಸ್ ನಿಲ್ದಾಣ ದಿಂದ ಕೆ. ಹೆಚ್. ಡಿ. ಸಿ. ಕಾಲೋನಿ ವರೆಗಿನ ಮಾಂಸ ಅಂಗಡಿಗಳ ತೆರವು ಗೊಳಿಸುವ ಕುರಿತು ಚರ್ಚೆ ಮಾಡಲಾಯಿತು. ನೀರು ಶುದ್ದೀಕರಣ ಘಟಕಗಳ ಕುರಿತು ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ಸೃಜಿಸಿರುವ ವಸತಿ ವಿನ್ಯಾಸಗಳ ಅನುಮೋದನೆಯ ಕುರಿತು ಚರ್ಚೆ ಮಾಡಲಾಯಿತು ಯು. ಜಿ. ಡಿ. ಕುರಿತು ಸಾಕಷ್ಟು ಸಮಸ್ಸೆಗಳ ಬಗ್ಗೆ ಚರ್ಚಿಸಲಾಯಿತು. ರಾಜಕುಮಾರ್ ಹಬೀಬ್ ಇಂಜಿನಿಯರ್ ಶೀಘ್ರದಲ್ಲಿ ಅಮೃತ 2.0 ಹಾಗೂ ಯು. ಜಿ. ಡಿ ಕುರಿತು ಪುರಸಭೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ಕರೆಯಲು ಪುರಸಭೆ ಸದಸ್ಯರ ತೀರ್ಮಾನ. ಇದೇ ವಾರದಲ್ಲಿ ಗುರುಮಠಕಲ್ ನಗರದ ಬಸ್ ನಿಲ್ದಾಣದಿಂದ ನಾರಾಯಣಪೆಟ್ ಕ್ರಾಸ್ ವರೆಗಿನ ರಸ್ತೆ ನಿರ್ಮಾಣ ಕಾರ್ಯಕ್ರಮ ಪ್ರಾರಂಭ ಮಾಡುವದಾಗಿ ಲ್ಯಾಂಡ್ ಆರ್ಮಿ ಯಾದಗಿರಿ ಸಹಾಯಕ ಇಂಜಿನಿಯರ ತಿಳಿಸಿದರು. ಪುರಸಭೆ ಆಯಾ ವ್ಯಯ ವಿವರಿಸಲಾಯಿತು.ಈ ಸಭೆಯಲ್ಲಿ ಪುರಸಭೆ ಚುನಾಯಿತ ಸದಸ್ಯರು, ನಾಮ ನಿರ್ದೇಶನ ಸದಸ್ಯರು, ಪುರಸಭೆ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು, ಹಾಜರಿದ್ದರು.
ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಿ:-ಬಿ.ಫೌಜಿಯಾ ತರನ್ನುಮ್
ಶಿಕ್ಷಣದಿಂದ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿ ಬದಲಾವಣೆ ಸಾಧ್ಯ :ಶಾಸಕ ತುನ್ನೂರ